ಕೆಲಸ ಹುಡುಕುವವರ ಕೈಪಿಡಿ

ಕೆಲಸ ಹುಡುಕುವವರ ಕೈಪಿಡಿ:

ಕಂಪನಿಯ ಸಂಸ್ಕೃತಿಯ ದೃಷ್ಠಿಕೋನದಿಂದ

ಸಂಕ್ಷಿಪ್ತವಾಗಿ:

. ನೀವು ಸೇರುವ ಕಂಪನಿಯ ಸಂಸ್ಕೃತಿಯ ಬಗ್ಗೆ ಅರಿವಿರಲಿ, ಆಗ ನೀವು ಸಂಸ್ಥೆಗೆ ಹೊಂದಿಕೊಂಡು  ಸಂತೋಷದಿಂದ ಇರಲು ಸಾಧ್ಯ.

.ಕಂಪನಿಗಳು ಕೂಡ ತಮ್ಮ ಸಂಸ್ಥೆಯ ಸಂಸ್ಕೃತಿಗೆ ಒಗ್ಗಿಕೊಳ್ಳುವ ಮನಸ್ಥಿತಿ ಇರುವವರನ್ನು ಹುಡುಕುತ್ತಿರುತ್ತಾರೆ

. ಯಾವ ಕೆಲಸಗಾರನ ಮನಸ್ಥಿತಿ ಕಂಪನಿಯ ಸಂಸ್ಕೃತಿಯ ಜೊತೆಗೆ ತಾಳೆ ಆಗುವುದೋ ಆತ ಬಲು ಬೇಗ ತನ್ನನ್ನು ತಾನು ತೊಡಗಿಸಿಕೊಂಡು ಅದ್ಭುತ ಕೆಲಸಗಳನ್ನು ಮಾಡಿ ಹಾಗು ಬಹು ಸಮಯ ಕಂಪನಿಯಲ್ಲೇ ಉಳಿಯುತ್ತಾನೆ

. ಯಾವುದೇ ಕಂಪನಿಯ ಮೂರು ಅಂಶಗಳ ಬಗ್ಗೆ ತಿಳಿಯಿರಿ :ಪರ್ಪಸ್, ಫಿಲಾಸಫಿ ಹಾಗು ಪ್ರಿಯೋರಿಟಿಸ್ (ಮೂರುಪಿಗಳು )

. ಕಂಪನಿಯ ಸಂಸ್ಕೃತಿಯ ಅರಿವಿನ ಮೊದಲು ನಿಮ್ಮ ವೈಚಾರಿಕತೆ ಏನೆಂಬುದು ತಿಳಿಯುವುದು ಅವಶ್ಯ

. ನಿಮ್ಮ ವಿಚಾರಗಳು ಹಾಗು ಕಂಪನಿಯ ಸಂಸ್ಕೃತಿಯ ನಡುವೆ ಸಾಮ್ಯವಿದೆಯೇ ಎಂದು ತಿಳಿಯಿರಿ

 

ಈ ಮೇಲಿನ ಅಂಶಗಳ ಆದರಿಸಿ ಇನ್ನು ಹೆಚ್ಚು ತಿಳಿಯಲು ಸ್ವಲ್ಪ ವಿಸ್ತಾರವಾಗಿ ಓದುವುದು :

೧. “ವ್ಯಕ್ತಿತ್ವ ಯೋಗ್ಯ “

ಯಾವುದೇ ಕಂಪನಿ ಹೊಸ ಕೆಲಸಗಾರನನ್ನು ಎರಡು ಪ್ರಮುಖ ಅಂಶಗಳ ಆದರದ ಮೇಲೆ ತೆಗೆದು ಕೊಳ್ಳುವುದು ಅದರಲ್ಲಿ ಆ ಕೆಲಸಕ್ಕೆ ಆ ವ್ಯಕ್ತಿಯ ಜ್ಞಾನ ಮತ್ತು ಕೌಶಲ್ಯ ಹೊಂದಾಣಿಕೆ ಇದ್ಯೋ ಇಲ್ಲವ ಅನ್ನೋದು ಪ್ರಮುಖವಾದರೆ  ಅದರ ನಂತರ ಮುಖ್ಯವಾದ್ದುದೇ ಆ ವ್ಯಕ್ತಿಯ ವ್ಯಕ್ತಿತ್ವ ಮತ್ತು ವಿಚಾರಗಳು ತಮ್ಮ ಕಂಪನಿಯ ಸಂಸ್ಕೃತಿಯ ವಿಚಾರಗಳಿಗೆ ಹೊಂದಾಣಿಕೆ ಆಗುವುದೇ ಇಲ್ಲವೆ ಎಂದು.

೨. “ನಿಮ್ಮನ್ನು ತಿಳಿಯಿರಿ”

ಕಂಪನಿಯ ಬಗ್ಗೆ ತಿಳಿಯುವ ಮೊದಲು ನಿಮ್ಮಗೆ ಏನು ಬೇಕು, ನಿಮ್ಮ ಜೀವನದ ಉದ್ದೇಶವೇನು. ಉದಾಹಾರಣೆಗೆ “ಜನಕ್ಕೆ ಸಹಾಯ ಮಾಡಬೇಕು”,”ಪರಿಸರ ಕಾಪಾಡಬೇಕು”,”ಇಡೀ ಪ್ರಪಂಚ ಸುತ್ತಬೇಕು” ಹೀಗೆ ನಿಮ್ಮ ಉದ್ದೇಶಕ್ಕೆ ಈ ಕಂಪನಿ ನೆರವಾಗುವುದೇ ಎಂಬುದನ್ನು ಪರಿಶೀಲಿಸಿ, ಸಂಬಳವೊಂದೇ ಸಾಕು ಎಂಬುದು ಹಳೆಯ ಮಾತು.

೩. “ಮೂರು ‘ಪಿ’ ಗಳು “

ಆಗಲೇ ತಿಳಿಸಿದಂತೆ ಮೊದಲು ಮೂರು ‘ಪಿ’ಗಳ ಬಗ್ಗೆ ತಿಳಿಯಬೇಕು

             ಪರ್ಪಸ್ : ಆ ಕಂಪನಿಯ ಮೂಲ ಉದ್ದೇಶ ಏನೆಂಬುದು ತಿಳಿಯಲು ಆ ಕಂಪನಿಯ ‘ಮಿಷನ್’ ಮತ್ತು ‘ವಿಷನ್’ ಬಗ್ಗೆ ಗಮನಹರಿಸಿ ಹೊರತು ಆ ಕಂಪನಿ ಏನನ್ನು ತಯಾರು ಮಡುತೆಂಬುದಲ್ಲ
             ಫಿಲಾಸಫಿ : ಆ ಕಂಪನಿ ತನ್ನ ಉದ್ಯೋಗಿಗಳನ್ನ ಈಗ ಹೇಗೆ ನಡಿಸಿಕೊಳ್ಳುತ್ತಿದೆ , ಆ ಉದ್ಯೋಗಿಗಳ ವಿಶ್ವಾಸ ಹೇಗಿದೆ, ಅಲ್ಲಿ ಕೆಲಸ ಮಾಡಲು ಎಷ್ಟು ಗರ್ವಪಡುತ್ತಾರೆ , ಕಂಪನಿ ಇತರರೊಡನೆ ಹೇಗೆ ವ್ಯವಹರಿಸುತ್ತಾರೆ ಎಂಬುದೆಲ್ಲ ಪ್ರಮುಖ ಅಂಶಗಳೇ ಹಾಗು ಆ ಕಂಪನಿಯ ಫಿಲಾಸಫಿಯಾಗಿರುತ್ತದೆ.
ಪ್ರೊಜೆಕ್ಷನ್ : ಆ ಕಂಪನಿ ತನ್ನ ಗ್ರಾಹಕರಿಗೆ ಹಾಗು ಸಾಮಾನ್ಯ ಜನರಿಗೆ ತನ್ನ ಮುಂದಿನ ಆಲೋಚನೆಗಳು ಮತ್ತು ವ್ಯವಹಾರಿಕ ಚಟುವಟಿಕೆಗಳ ಬಗ್ಗೆ ಎಷ್ಟು ಮುಕ್ತವಾಗಿದೆ ಹಾಗು ಪ್ರಗತಿಯ ಹಾದಿಯಲಿದೆಯಾ ಎಂಬುದನ್ನು ಪರಿಶೀಲಿಸಿ.

೪. ಉದ್ಯೋಗಿಗಳ ಅನಿಸಿಕೆ :

ಕಂಪನಿಯ ಈಗಿನ ಉದ್ಯೋಗಿಗಳ ಅನಿಸಿಕೆಗಳನ್ನು ಹಲವಾರು ಜಾಲತಾಣಗಳಲ್ಲಿ ಹುಡುಕಿ ತಿಳಿಯಿರಿ, ನಿಮ್ಮ ಸ್ನೇಹಿತರ ಗುಂಪಲ್ಲಿ ಕೆಲಸ ಮಾಡುವವರ ಬಳಿ ಚರ್ಚಿಸಿ. ಶೇಕಡಾ ೮೦ ಮೇಲೆ ಅವರ ಅಭಿಪ್ರಾಯಗಳಿಗೆ ಮನ್ನಣೆ ಇರುವುದು ಆದರೆ ಒಬ್ಬರೋ ಇಬ್ಬರೋ ಮೇಲೆ ಪೂರ್ವಗ್ರಹ ಪೀಡಿತರಾಗಬೇಡಿ.

೫. ನಿಮ್ಮ ಅಂತರಂಗದ ಮಾತು :

ಕಂಪನಿಯ  ಸಂಸ್ಕೃತಿಯ ಭಾಗವಾಗಿ ಏನೆಲ್ಲಾ ಸಂಶೋಧನೆ ಮಾಡಿದರು ನಿಮ್ಮ ಅಂತರಂಗದ ಮಾತನ್ನು ನಿರಾಕರಿಸಬೇಡಿ, ಬಹುಷಃ ಮೇಲಿನದೆಲ್ಲ ಸುಳ್ಳಾದರು ಅದು ನಿಮ್ಮ ದಾರಿದೀಪವಾಗಬಹುದು.

(This article is just a translation of my understanding of Sheila Margolis work on Job Seekers Manual: ‘https://sheilamargolis.com/’. No copyrights infringement intended)

P.S: If you want to have the PDF version of the document, please write to cognideep@gmail.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s