ಹೌದು,ಮತ್ತೆ

“ಹೌದು,ಮತ್ತೆ”

ಹೇಗೆ ಇಂಪ್ರೂವ್ ಚಟುವಟಿಕೆ “ಬೇಡ, ಆದರೆ” ಆಲೋಚನೆಯನ್ನು ದೂರಮಾಡುತ್ತದೆ

ಇಂಪ್ರೂವ್ ಒಂದು ವೇದಿಕೆ ಮೇಲೆ ಆ ಕ್ಷಣದಲ್ಲಿ ಕಥೆಯನ್ನು ಸೃಷ್ಠಿಸಿ, ಪಾತ್ರಗಳನ್ನು ಪೋಷಿಸಿ , ಒಂದು ದೃಶ್ಯವನ್ನು ಕಟ್ಟುವ ನಾಟಕ ವಿಧಾನ. ಈ ವಿಧಾನದಲ್ಲಿ ಉಪಯೋಗಿಸುವ ಅನೇಕ ಅಂಶಗಳನ್ನು ನಾವು ನಮ್ಮ ಕೆಲಸದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

೧.  ಸೆಕೆಂಡ್ ಸಿಟಿ” ಎಂಬ ಚಿಕ್ಯಾಗೋವಿನ ಒಂದು ಇಂಪ್ರೂವ್ ಗುಂಪು ಉಪಯೋಗಿಸುವ ಅನೇಕ ವಿಧಾನಗಳನ್ನು ಹೇಗೆ ನಮ್ಮಲ್ಲಿ ಹಾಗು ನಮ್ಮ ಕಂಪನಿಯಲ್ಲಿ ಅಳವಡಿಸಿಕೊಂಡು ಹೆಚ್ಚು ಕ್ರಿಯಾಶೀಲತೆ , ಸೋಲಿನ ಭಯದ ನೀವಾರಣೆ ಹಾಗು ಚತುರತೆಯನ್ನು ಪಡೆಯಬಹುದು.

೨. ಎಲ್ಲ ಇಂಪ್ರೂವ್ ಗಳು ಕೂಡ ಈ ಎರಡು ಪದಗಳಿಂದ ಉದಯಿಸುತ್ತೆ ಆ ಪದಗಳೇ “ಹೌದು, ಮತ್ತೆ “. ಯಾರಾದರೂ ಒಂದು ಐಡಿಯಾ/ಸಹಲೇ ಕೊಟ್ಟರೆ ಮೊದಲು “ಹೌದು” ಎಂದು ನಂತರ “ಮತ್ತೆ” ಎಂದು ತಮ್ಮಲ್ಲಿನ ಅನಿಸಿಕೆಗಳನ್ನು ತಿಳಿಸುವ ಒಂದು ಅಭ್ಯಾಸ.

೩. “ಹೌದು,ಮತ್ತೆ” ಎಂಬ ಪದಗಳು ಮುಕ್ತ ಚರ್ಚೆಗೆ ಆಹ್ವಾನ ಕೊಟ್ಟಂತೆ

೪.ಒಂದು ಗುಂಪು ಒಟ್ಟಾರೆಯಾಗಿ ಯಾವಾಗಲೂ ಆ ಗುಂಪಿನ ಪ್ರತಿ ಮಂದಿಗಿಂತ ಚತುರ ಮತ್ತು ಕ್ರಿಯಾಶೀಲವಾಗಿರುತ್ತೆ

೫. ಯಾವುದೇ ಒಂದು ಸಂಸ್ಥೆ ಯಾವಾಗಲೂ ತನ್ನ ಮೇಲಿನ ಅಭಿಪ್ರಾಯಗಳನ್ನು ಪ್ರಶ್ನೆಸುವಂತಿರಬೇಕು

೬. ಗುಂಪಿನಲ್ಲಿ ಒಂದು ಚಿಕ್ಕ ಸ್ವಾರ್ಥ ದೊಡ್ಡ ಬಿರುಕನ್ನು ಉಂಟು ಮಾಡಬಲ್ಲದು

೭. ಸೋಲಿನ ಭಯ, ಕ್ರಿಯಾಶೀಲತೆಯನ್ನು ಯಾವಾಗಲೂ ಕೊಲ್ಲುತ್ತದೆ

೮.ಇಂಪ್ರೂವ್ ತಂಡಗಳು ಅತಿಯಾದ ತನ್ನ ಮೇಲಿನ ಭಯವನ್ನು ಹೋಗಲಾಡಿಸಿ, ವಹಿಸಿರುವ ಕೆಲಸದ ಕಡೆ ಗಮನ ಹರಿಸಲು ಸಹಕರಿಸುತ್ತದೆ

೯. “ಸೆಕೆಂಡ್ ಸಿಟಿ”  ಸಂಸ್ಥೆಯ ದ್ವಾರದ ಮೇಲೆ ಈ ರೀತಿ ಅಕ್ಷರಗಳನ್ನು ಕಾಣಬಹುದು

– “ಬೇಜಾರಾಗುತ್ತೆ ಎಂಬ ಭಯ ಬೇಡ”

– “ಗೌರವಿಸಿ, ಪೂಜಿಸಬೇಡಿ”

–  “ಜನರನ್ನು ನಗಿಸಿ ಮತ್ತು ಆಲೋಚನೆಗೆ ತಳ್ಳಿ ”

ಈ ಮೇಲಿನ ಅಂಶಗಳ ಆದರಿಸಿ ಇನ್ನು ಹೆಚ್ಚು ತಿಳಿಯಲು ಸ್ವಲ್ಪ ವಿಸ್ತಾರವಾಗಿ ಓದುವುದು :

ಸೆಕೆಂಡ್ ಸಿಟಿ:

ಚಿಕಾಗೊ ಮೂಲದ ಈ ಇಂಪ್ರೂವ್ ಸಂಸ್ಥೆ ಈ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಈ ತಂಡದ ಸದಸ್ಯರು ಅನೇಕ ಕಂಪೆನಿಗಳಲ್ಲಿ (ಗೂಗಲ್,ಮೊಟೊರೊಲಾ,ನಿಸ್ಸಾನ್ ಮುಂತಾದವು) ತಮ್ಮ ವಿಧಾನಗಳ ಬಗ್ಗೆ ತಿಳಿಸಿ ಅಲ್ಲಿನ ಕಾರ್ಮಿಕರಲ್ಲಿ ಒಟ್ಟಾಗಿ ಕೆಲ್ಸಮಾಡೋದು, ಜಾಗೃತವಾಗಿ ಕೇಳುವುದೆಂದರೇನು, ಕ್ರಿಯಾಶೀಲತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಇಂಪ್ರೊವಿನ ಏಳು ಅಂಶಗಳು

೧. “ಹೌದು,ಮತ್ತೆ”
ಆಗಲೇ ತಿಳಿಸಿದಂತೆ ಈ ಇಂಪ್ರೂವ್ ಉದಯವಾಗೋದೇ ಈ ಎರಡು ಪದಗಳಿಂದ ಅಂದರೆ ತಪ್ಪಾಗಲಾರದು.  ಒಂದು ಹೊಸ ವಿಚಾರವನ್ನು ನಿಮ್ಮ ಮುಂದೆ ಮಂಡಿಸಿದಾಗ ಮೊದಲು “ಹೌದು” ಎಂದು ಅದನ್ನು ಒಪ್ಪಿಕೊಳ್ಳಿ ತದನಂತರ “ಮತ್ತೆ ” ಎಂದು ಸೇರಿಸಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಈ ಕ್ರಮದಿಂದ ವಿಷಯ ಮಂಡಿಸಿದವರರೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಧ್ಯ.

೨. “ತಂಡ/ಗುಂಪು”
ಇಂಪ್ರೊವಿನಲ್ಲಿ ಯಾವಾಗಲು ಒಂದು ತಂಡವಾಗಿ ಪ್ರತಿನಿಧಿಸುವ ಪ್ರಕಾರ, ಪ್ರಶಂಸೆ ಬಂದರು ಅದು ತಂಡಕ್ಕೆ ಹಾಗೆಯೇ ತಪ್ಪುಗಳ ಹೊಣೆಕೂಡ ತಂಡವೇ ಹೊರಲಿದೆ. ಈ ದೃಷ್ಠಿಯಿಂದ ಒಂದು ಉತ್ತಮ ತಂಡದ ಧ್ಯೆಯ ಬಲುಪ್ರಮುಖ.

೩. “ರಚನೆ”
ರಚನೆಯ ಪ್ರಕ್ರಿಯೆಯಲ್ಲಿ ಇಡೀ ತಂಡವು ತೊಡಗುವುದರಿಂದ ಎಲ್ಲರ ಅಭಿಪ್ರಾಯಗಳಿಗೆ ವೇದಿಕೆ,ಅವರ ಇಷ್ಟಗಳು ಮತ್ತು ತಮ್ಮ ಹಿಂಜಗಿರಿಕೆಗಳನ್ನೂ ಮುಜಗುರವಿಲ್ಲದೆ ಹೇಳಬಹುದು. ಇದರಿಂದ ತಮ್ಮ ತಂಡದ ಪ್ರತಿಸದಸ್ಯನ ಸಾಧಕಬಾಧಕಗಳ ತಿಳುವಳಿಕೆಯಿಂದ ಸಂಬಂಧಗಳ ವೃದ್ಧಿಗೆ ಸಹಕಾರಿ.

೪. ಸತ್ಯಾಸತ್ಯತೆ
ನಮ್ಮಿಂದ ತಪ್ಪುಗಳಾಗುತ್ತೆ ಎಂದು ತಿಳಿಯುವುದು ಒಂದು ಗುಂಪಿಗೆ ಅತಿಮುಖ್ಯ. ಆದರೆ ಆ ತಪ್ಪುಗಳಿಂದ ಕಲಿತ ಪಾಠವನ್ನು ಅಳವಡಿಸಿಕೊಂಡು ಮುಂದೊಗಬೇಕು.  ನಿಮ್ಮ ಸುತ್ತಲಿರುವ ವಾಸ್ತವತೆಯ ಬಗ್ಗೆ ಪ್ರಶ್ನಿಸುವ ಮನೋಭಾವವಿರಬೇಕು ಮತ್ತು ಅಧಿಕಾರದಲ್ಲಿರುವವರೊಂದಿಗೆ ಸತ್ಯದಿಂದ ಮಾತಾಡುವ ಧೈರ್ಯ ರೂಡಿಸಿಕೊಳ್ಳಬೇಕು. ಎಲ್ಲರನು ಗೌರವಿಸೋಣ ಆದರೆ ಪೂಜಿಸೋದು ಬೇಡ ಏಕೆಂದರೆ ಒಬ್ಬರನ್ನು ಪೂಜ್ಯ ಭಾವನೆಯೊಂದಿಗೆ ನೋಡಿದಾಗ ನಮ್ಮ ತತ್ಕ್ಷಣದ ಪ್ರತಿಕ್ರಿಯೆಗಳಿಗೆ ಬೀಗಬೀಳಬಹುದು ಮತ್ತು ಸತ್ಯ ಮರೆಮಾಚಲೂಬಹುದು.ವಿಡಂಬನೆ ಮತ್ತು ಹಾಸ್ಯದ ನಡುವಿನ ಚಿಕ್ಕ ಭೇದವನ್ನು ತಿಳಿದಿರುವುದು ಅತಿಮುಖ್ಯ.

೫. ಸೋಲು
ಸೋಲನ್ನು ಸ್ವೀಕರಿಸುವುದನ್ನು ಕಲಿಬೇಕು.ಇಂಪ್ರೂವ್ ತಂಡದವರಿಗೆ ಪ್ರತಿ ಒಂದು ಷೋ ಕೂಡ ಅಪರಚಿತರ ಜೊತೆಗಿನ ಒಡನಾಟ, ಒಂದು ಷೋ ಅದ್ಭುತ ಎಂದೆನಿಸಿದರೆ ಮತ್ತೊಂದು ಸೂಪರ್ ಫ್ಲಾಪ್ ಆಗಬಹುದು ಆದರೆ ಸಮಚಿತ್ತದಿಂದ ಎರಡನ್ನು ಸ್ವೀಕರಿಸೋ ಗುಣ ಬೆಳಿಸಿಕೊಳ್ಳಲೇ ಬೇಕು.

೬. “ಹಿಂಬಾಲಿಸವನ ಹಿಂಬಾಲಿಸು”
ಇಂಪ್ರೂವ್ ತಂಡದಲ್ಲಿ ನಾಯಕತ್ವ ಯಾವಾಗಲೂ ಒಬ್ಬರದೇ ಆಗಿರುವುದಿಲ್ಲ. ಆಗಿನ ಪ್ರಚಲಿತ ಪರಿಸ್ಥಿತಿಗೆ ತಕ್ಕಂತೆ ತಂಡದಲ್ಲಿ ಹಿಂಬಾಲಕನಾಗಿದ್ದವ ನಾಯಕನಾಗಬಹುದು. ಹೀಗೆ ಒಮ್ಮೆ ತಂಡದಲ್ಲಿ ಅನುಸರಿಸುತ್ತಿದ್ದವನು ನಾಯಕನಾದಾಗ ಈಗಿನ ನಾಯಕನಾದವನು ಹಿಂಬಾಲಕನೇ.

೭. “ಕೇಳುವುದು”
ಇದು ಪ್ರಮುಖ ಅಂಶ.ನಮ್ಮಲ್ಲಿ ಅನೇಕರು ಪ್ರತಿಕ್ರಿಯೆಗಾಗಿ ಕೇಳಿಸಿಕೊಳ್ಳುತ್ತೇವೆ ಹೊರೆತು ನಮ್ಮ ತಿಳುವಳಿಕೆಗಾಗಿ ಕೇಳಿಸಿಕೊಳ್ಳೋದೇ ಇಲ್ಲ. ಇಂದಿಗೂ ಮಾತನ್ನು ಪೂರ್ಣವಾಗಿ ಆಲಿಸಿ ತದನಂತರ ಆಲೋಚಿಸಿ ಪ್ರತಿಕ್ರಿಯೆ ಕೊಡುವುದನ್ನು ರೂಡಿಸಿಕೊಳ್ಳಬೇಕು.

ಇಂಪ್ರೂವ್ ಮೂಲದ ಚಟುವಟಿಕೆಗಳು :

೧. “ಒಮ್ಮೆಗೆ ಒಂದು ಪದ”
ಆರರಿಂದ ಹತ್ತು ಮಂದಿಯ ತಂಡ ವೃತ್ತಾಕಾರದಲ್ಲಿ ನಿಂತು , ಮೊದಲೆನೆಯವ ಹೇಳುವ ಒಂದು ಪದಕ್ಕೆ ಸರಿಯಾಗಿ ಆತನ ಪಕ್ಕದ ಸದಸ್ಯ ಮತ್ತೊಂದು ಪದ ಮಾತ್ರ ಹೇಳಬೇಕು ಆದರೆ ಒಟ್ಟಾರೆಯಾಗಿ ಕೊನೆಯಲ್ಲಿ ಒಂದು ಅರ್ಥಪೂರ್ಣ ಕಥೆಯಾಗಿರಬೇಕು.

೨. “ನಾನು ಇಲ್ಲದ ಮಾತು”
ಜೋಡಿಗಳಾಗಿ ಗುಂಪನ್ನು ವಿಂಗಡಿಸಿ ತಮ್ಮಗೆ ಇಷ್ಟ ಬಂದ ವಿಷಯದ ಬಗ್ಗೆ ಮಾತನಾದ ಬೇಕು ಆದರೆ ಎಂದಿಗೂ “ನಾನು” ಎಂಬ ಪದಪ್ರಯೋಗ ಮಾಡುವಂತಿಲ್ಲ.

೩.”ಕನ್ನಡಿ”
ಒಮ್ಮ ಮಾಡುವ ಭಾವಗಳನ್ನು ಇನೊಬ್ಬ ಅನುಕರಿಸಬೇಕು.

೪. “ಭಾವನಾತ್ಮ ನಟನೆ”
ಗುಂಪಿನ ನಾಯಕ ಹೇಳುವ ಭಾವ ವ್ಯಕ್ತ ಪಡಿಸಬೇಕು ಮತ್ತು ಅನುಕರಿಸಬೇಕು. ನಾಯಕ ಮುಂದಿನ ಭಾವ ಹೇಳುವವರೆಗೂ ಹೀಗೆ ಮುಂದುವರಿಯಬೇಕು

೫.”ಮುತ್ತುಗಳ ಜೋಡಣೆ”
ಗುಂಪಿನ ಸದಸ್ಯರನ್ನು ನಿಲ್ಲಿಸಿ ಮೊದಲು ಮತ್ತು ಕೊನೆಯಲ್ಲಿ ನಿಂತ ಸದಸ್ಯರಿಗೆ ಎರಡು ಅಸಂಬದ್ಧ ವಾಕ್ಯಗಳನ್ನ ಕೊಡಲಾಗುತ್ತೆ , ಇವರಿಬ್ಬರ ಮದ್ಯೆ ಇರುವ ಸದಸ್ಯರು ಯೋಚಿಸಿ ಆ ಮೊದಲನೇ ವಾಕ್ಯವನ್ನು ಮುಂದುವರಿಸುತ್ತಾ ಕಥೆ ಹಣೆಯಬೇಕು ಹಾಗೆ ಕೊನೆಯವ ಕೊಟ್ಟ ವಾಕ್ಯದಲ್ಲೇ ಕಥೆ ಮುಗಿಯುವಂತೆ ಆಲೋಚಿಸಬೇಕು. ಈ ಕ್ರಮದಿಂದ ಎಲ್ಲರು “ಕೇಳುವ” ಪ್ರಕ್ರಿಯೆಯಲ್ಲಿ ಸಕ್ರಿಯಾವಾಗಿ ಪಾಲ್ಗೊಳ್ಳುತ್ತಾರೆ.

೬. “ಕೊನೆ ಪದದಿಂದ ವಾಕ್ಯ “
ಇದು ನಮ್ಮ ಹಂಸಲೇಖ ಅವರು ಬರೆದಿರುವ ರಣಧೀರ ಚಿತ್ರದ ಹಾಡಿನ ಪರಿ. ಸದಸ್ಯರು ಹೇಳಿ ಮುಗಿಸುವ ವಾಕ್ಯದ ಕೊನೆ ಪದದಿಂದ ಮುಂದಿನ ವ್ಯಕ್ತಿ ವಾಕ್ಯ ಶುರು ಮಾಡಬೇಕು.

೭. “ಮರಳಿ ಹೇಳು”
ಸದಸ್ಯರನ್ನು ಜೋಡಿಗಳಾಗಿ ವಿಂಗಡಿಸಿ ಒಬ್ಬರು ಹೇಳಿ ಮುಗಿಸಿದ ವಾಕ್ಯವನ್ನು ಮತ್ತೆ ಮರಳಿ ಹೇಳಿ ತಮ್ಮ ಅಭಿಪ್ರಾಯ ಸೂಚಿಸಬೇಕು, ಹೀಗೆ ಇನ್ನೊಬ್ಬ ಮುಗಿಸಿದ ಕಡೆ ವಾಕ್ಯವನ್ನು ಮತ್ತೆ ಮರಳಿ ಹೇಳಿ ಮೊದಲಿನವ ತನ್ನ ಅಭಿಪ್ರಾಯ ಮಂಡಿಸಬೇಕು. ಹೀಗೆ ಒಂದೆರಡು ನಿಮಿಷಗಳ ಚಟುವಟಿಕೆ ಇದು.

(This article is just a translation of my understanding of “Yes, And” by Kelly Leonard & Tom Yorton.
No copyrights infringement intended)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s